



ಆರ್.ಎಸ್.ಬಿ ಕೊಂಕಣಿ ಭಾಷಿತ ಬಹುನಿರೀಕ್ಷಿತ ಚಲನಚಿತ್ರ "ಅಮ್ಚೆ ಸಂಸಾರ್ " ಇದರ ಟ್ರೇಲರ್, ಪೋಸ್ಟರ್, ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಇದೇ ಬರುವ ಸೆಪ್ಟೆಂಬರ್ 17ರಂದು ಸಂಜೆ 6.00 ಗಂಟೆಗೆ ಆರ್.ಎಸ್.ಬಿ ಸಭಾ ಭವನ ಮಣಿಪಾಲ ಇಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ ಸಮಾಜದ ಗಣ್ಯರು ಹಾಗೂ ಸಿನೆಮಾ ರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಇದೊಂದು ಸಂಸಾರದ ನೋವು, ನಲಿವು, ಜವಾಬ್ದಾರಿಯನ್ನು ತೋರಿಸುವುದರ ಜೊತೆಗೆ ಹಿಂದಿನ ನಮ್ಮ ಮನೆಗಳಲ್ಲಿ ಇರುವ ಪದ್ಧತಿಯನ್ನು ಆಚಾರ ವಿಚಾರಗಳನ್ನು ಇಂದಿನ ಪೀಳಿಗೆಗೆ ತೋರಿಸುವುದೇ ಈ ಚಿತ್ರದ ಮುಖ್ಯ ಉದ್ದೇಶ. ಸಂದೀಪ್ ಕಾಮತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಭುವನೇಶ್ ಪ್ರಭು ಹಿರೇಬೆಟ್ಟು ಛಾಯಾಗ್ರಾಹಣ, ಪ್ರಜ್ವಲ್ ಸುವರ್ಣ ಛಾಯಾಗ್ರಹಣ/ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಕಾರ್ತಿಕ್ ಮುಲ್ಕಿ ಸಂಗೀತ ನೀಡಿದ್ದಾರೆ. ವಿಜಯ್ ನಾಯಕ್, ರೋಹನ್ ನಾಯಕ್, ಭವ್ಯ ಪ್ರಭು, ಪಾಂಡುರಂಗ ಪ್ರಭು ಪರ್ಕಳ, ಪೂರ್ಣಿಮಾ ಸುರೇಶ್, ಪುಂಡಲೀಕ ಮಾರಾಠೆ, ಸುಮತಿ ಕಾಮತ್, ಸದಾನಂದ ನಾಯಕ್, ಕುಸುಮ ಕಾಮತ್, ಪ್ರಸಾದ್ ನಾಯಕ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.